Surprise Me!

ದಿಗಂತ್ ಜೊತೆ ಮದುವೆ ಸುದ್ದಿ ಬಗ್ಗೆ ಐಂದ್ರಿತಾ ಕೊಟ್ಟ ಪರೋಕ್ಷ ಪ್ರತಿಕ್ರಿಯೆ! | Filmibeat Kannada

2017-10-31 269 Dailymotion

ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಆದರೆ ಈ ವಿಷಯದ ಬಗ್ಗೆ ಇದೀಗ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ದಿಗಂತ್ ಮತ್ತು ಐಂದ್ರಿತಾ ಮದುವೆ ಸುದ್ದಿ ಹರಿದಾಡಿತ್ತು. ದಿಗಂತ್ ಮತ್ತು ಐಂದ್ರಿತಾ ಮದುವೆ ಮುಂದಿನ ವರ್ಷ ನಡೆಯಲಿದೆ ಎಂದು ಕೆಲವು ದಿನಪತ್ರಿಕೆಗಳು ವರದಿ ಮಾಡಿವೆ. ಜೊತೆಗೆ ದಿಗಂತ್ ಅವರೇ ಐಂದ್ರಿತಾ ಜೊತೆ ಮದುವೆಯಾಗುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಟಿ ಐಂದ್ರಿತಾ ಟ್ವಿಟ್ಟರ್ ಖಾತೆಯ ಮೂಲಕ ಪರೋಕ್ಷವಾಗಿ ಉತ್ತರಿಸಿದ್ದಾರೆ. <br />ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಇಬ್ಬರು ಮುಂದಿನ ವರ್ಷ ಮದುವೆಯಾಗುತ್ತಾರೆ. ಈ ಬಗ್ಗೆ ಸ್ವತಃ ದಿಗಂತ್ ಸ್ಪಷ್ಟಪಡಿಸಿದ್ದು, ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ'' ಎನ್ನುವ ಸುದ್ದಿ ಇದೀಗ ಕೇಳಿಬಂದಿದೆ.ಐಂದ್ರಿತಾ ತಾವು ನೇರವಾಗಿ ಮದುವೆ ಸುದ್ದಿ ಬಗ್ಗೆ ಏನು ಹೇಳಿಲ್ಲ. ಆದರೆ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಟ್ವೀಟ್ ಅನ್ನು ತಾವು ರೀ-ಟ್ವೀಟ್ ಮಾಡುವ ಮೂಲಕ ಇದು 'ಸುಳ್ಳು ಸುದ್ದಿ' ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.ಮದುವೆ ಬಗ್ಗೆ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ದಿಗಂತ್ ಮಾತ್ರ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಇದುವರೆಗೆ ಯಾವುದೇ ರಿಯಾಕ್ಷನ್ ನೀಡಿಲ್ಲ. <br /> Actor Diganth and Aindrita Ray are constantly getting married news.But Aindritha has responded indirectly to this issue.. watch this video.

Buy Now on CodeCanyon